ಒಂದೇ ಪ್ರೆಶ್ನೆ ಕೇಳುತಿದ್ದಾಳೆ ಇವಳು ಅವಳು
ನಿನಗೆ ನಾನೋ ಇಲ್ಲ ಅವಳೋ
ನಿನಗೆ ಬೇಕಿರುವುದು ಯಾವಳು?
ಈಗ ಯಾರನ್ನು ವಲಿಸಲಿ ಹೇಳು ?.
ಕಣ್ಣು ತೆರೆದಾಗ ಮೊದಲು ಕಂಡವಳು ಇವಳು.
ಹೃದಯ ತೆರೆದಾಗ ಮೊದಲು ಕಂಡವಳು ಅವಳು
ಭೂಮಿಗೆ ಕಾಲಿಟ್ಟಾಗ ಕೈ ಹಿಡಿದವಳು ಇವಳು
ಪ್ರಾಯಕೆ ಕಾಲಿಟ್ಟಾಗ ಜೊತೆ ನೆಡೆದವಳು ಅವಳು
ಯಾರನ್ನು ವಲಿಸಲಿ ಹೇಳು ?
ತುಟಿಗೆ ತುತ್ತನಿಟ್ಟವಳು ಇವಳು
ತುಟಿಗೆ ಮುತ್ತನಿಟ್ಟವಳು ಅವಳು
ಅತ್ತಾಗ ಮಡಿಲಕೊಟ್ಟವಳು ಇವಳು
ಅದೇ ಅತ್ತಾಗ ಹೆಗಲಕೊಟ್ಟವಳು ಅವಳು.
ಯಾರನ್ನು ವಲಿಸಲಿ ಹೇಳು ?
ಜೀವ ಕೊಟ್ಟವಳು ಇವಳು
ಜೀವನ ಕೊಟ್ಟವಳು ಅವಳು
ಮೊದಲ ಗುರು ಇವಳು
ಪ್ರೇಮ ಗುರು ಅವಳು
ಯಾರನ್ನು ವಲಿಸಲಿ ಹೇಳು ?
ನನ್ನ ಕನಸ ಕಂಡವಳು ಇವಳು
ಕನಸಲ್ಲಿ ನನ್ನ ಕಂಡವಳು ಅವಳು
ಕನಸ ಕಟ್ಟಿದವಳು ಇವಳು
ಕನಸ ಕೊಟ್ಟವಳು ಅವಳು
ಯಾರನ್ನು ವಲಿಸಲಿ ಹೇಳು ?
No comments:
Post a Comment