Thursday, December 30, 2010

ಚೆನ್ನಾಗಿ ತಿನ್ನಿ ಇಲ್ಲ ತೆಳ್ಳಗಾಗೋಕೆ ಮುಂಜಾನೆ ಓಡಿ

ಕುಡಿರಿ ಇಲ್ಲ ಇನ್ಮೇಲ್ ಕುಡಿಯೋಲ್ಲ ಅಂತ ಸಂಕಲ್ಪಮಾಡಿ

ಏನೆ ಬಿಡಿ ಏನೆ ಮಾಡಿ

ಆದ್ರೆ ವರ್ಷ ಪೂರ್ತಿ,

ನನ್ನ ಮರೀಬೇಡಿ, ಪ್ರೀತಿಮಾಡಿ

ಹೊಸ ವರ್ಷದ ಶುಭಾಶಯಗಳು

ನನ್ನ ಸಂಕಲ್ಪ ಸೋಮಾರಿತನ ಬಿಡಬೇಕು ಅನ್ನೋದು ನಿಮ್ಮ ಸಂಕಲ್ಪ ತಿಳಿಸಿ

Wednesday, June 30, 2010

ಎನ್ ಹೇಳ್ಲಿ ಇವನ ಕತೆನಾ...

ಎನ್ ಹೇಳ್ಲಿ ಇವನ ಕತೆನಾ...
ಇವನಂತೊನ ನಾನು ಯೆಲೆಲ್ಲು ನೋಡಿರಲಿಲ್ಲ. ಇವನು ಹುಟ್ಟಿದು ಒಂದು ದೊಡ್ಡ ಕತೆ ಅಂತೀರೋ ಮಿಸ್ಟ್ರಿ ಅಂತೀರೋ ನಾಕಾಣೆ. ಒಂದು ದಿನ ನಾಡು ರಾತ್ರಿ ಇವನು ಹುಟ್ಟಿದು. ಇದೇನು ದೊಡ್ಡ ವಿಷಯ ಅಂತೀರಾ ಇವನು ಹುಟ್ಟಿದು ಕೆಲದಿನಗಳ ಹಿಂದೆ ಗೆಳೆಯನಾದ ಪಕ್ಕದಮನೆ ಶಿವನ ದಯೆಯಿಂದ ಅನ್ನೋದು ದೊಡ್ಡ ವಿಷಯ.

ಇವನ ಅಪ್ಪನಿಗೂ ಬಹಳ ದಿನದಿಂದ ಈ ಆಸೆ ಇತ್ತು ಆದ್ರೂ ಬಹಳ ಸೋಮಾರಿ ಸೋ ಶಿವನ ದಯೆ ಇಂದ ನಾಡು ರಾತ್ರಿ ಸದ್ದು ಗದ್ದಲ ವಿಲ್ಲದೇ ಹುಟಿದ.

ಅದ್ ಯಾವ ಗಳಿಗೆಲ್ ಹುಟಿದ್‍ನೋ ಏನೋ ನೋಡಿ ಹುಟ್ಟಿದವನೆ ನೆಡೆಯಲು ಶುರು ಮಾಡಿದ. ಇದಕ್ಕೆ ಆ ಪಕ್ಕದಾಮನೆಯವನ ಸಹಾಯವೂ ಇತ್ತು ಅನ್ನಿ. ಎನ್ ಹೇಳ್ತೀರಿ ಅವ್ನ್ ಆಟಾನ ದಿನ ರಾತ್ರಿ ಆಯ್ತು ಅಂದ್ರೆ ಹಾಡನು ಕಿರ್ಚೊನು ಅಪ್ಪಾ ಸಾಕ್ ಸಾಕ್ ಹಾಗಿ ಹೋಗ್ತಿತ್ತು. ಇವನಿಂದ ದಿನ ರಾತ್ರಿ ನಿದ್ದೇನೆ ಇಲ್ಲ.

ಕೆಲ ದಿನಗಳ ನಂತರ ಈ ಪಕ್ಕದಮನೆಯವನು ಮನೆಗೆ ಬೀಗ ಹಾಕಿ ಯಾಕೋ ಅಜ್ಞಾತ ವಾಸಕ್ಕೆ ಹೋದ. ಅವನು ಅತ್ಲಾಗ್ ಹೋಗಿದ್ದೇ ಇವನಿಗೆ ಅವ್ರಪ್ಪನ ಗಾಳಿ ಸೋಕಿತು ನೋಡಿ ಇವನು ಸೋಮಾರಿ ಆಗೋಕ್ ಶುರು ಮಾಡಿದ. ಹಾಡೋಕೂ ಕಿರ್ಚೊಕು ಸೋಮಾರಿತನ ಈ ಬಡ್ಡಿ ಮಗನಿಗೆ ಎನ್ ಮಾಡೋದು.

ಆದ್ರೂ ಇವನೇನು ಸಾಮಾನ್ಯದವನ ಇವನು ಹಾಡೋದು ಕೇಳಿ ಇವನಿಗೆ ಆಲ್‌ರೆಡೀ ಫಾನ್ಸು ಫಾಲ್ಲೋವೆರ್ಸು . ಪಕ್ಕದ ಬೀದಿಯ ಒಂದು 17 ಮಂದಿ ಫ್ರೆಂಡ್‌ಸ. ಅದರಲ್ಲಿ ಗರ್ಲ್ ಫ್ರೆಂಡ್ಸ್ ಬೇರೆ. ಅದೆಲಾದ್ರೂ ಹೋಗ್ಲಿ ಅಂದ್ರೆ ಇವನ್ನ ದಿನ ನೋಡೋಕೆ ಇವನ ಜೊತೆ ಆಡೋಕೆ ಮನೆಗೆ ದಿನ ಜನನು ಬರ್ತಿದ್ರು ಯಿಸ್ಟಾ ಆದೋರು ಫ್ರೆಂಡ್ಸ್ ಆದ್ರೂ ಇವನ ಹಾಡೊದಕ್ಕೆ ಷಹಬಾಸ್‌ಗಿರಿ ಕೊಟ್ರೂ. ಇನ್ನೂ ಕೆಲವರು ಇವ್ನಜ್ಜಿ ಯೆನ್ ಹಡ್ತಾನೋ ಕಿರುಚ್ತಾನೋ ಒಂದು ಅರ್ತ ಆಗೋಲ್ಲ ಅಂತ ಬೈಕೊಂಡು ಹೊರಟೆ ಹೋದ್ರೂ.

ಈಸ್ಟೆಲ್ಲಾ ಇವನ ಬಗ್ಗೆ ಇವಾಗ್ ಯಾಕಪ್ಪಾ ಹೇಳ್ತಿದೀನಿ ಅಂದ್ರೆ ಇವನಿಗೆ ಒಂದು ವರ್ಷ ತುಂಬಿದೆ ಅದಕ್ಕೆ.

ಹೊ ಯಾರು ಅಂದ್ರ ಇವನು ಇನ್ಯಾರು ಅಲ್ಲಾರಿ ಇವನೇ ಸೋಮಾರಿಪ್ರಶಾಂತ ಬ್ಲೋಗೂ ಹಹಹ....

ಇವನು ವರುಷದ ಕೆಳಗೆ ಹುಟ್ಟಲಿಕ್ಕೆ ಮತ್ತು ಇವನನ್ನು ಬೆಳೆಸಲಿಕ್ಕೆ ಸಹಾಯ ಮಾಡಿದ ಪ್ರಿಯ ಗೆಳೆಯ ಶಿವು (ಯಳವತ್ತಿ ಬ್ಲಾಗ್) ಗೆ ನನ್ನ ಧನ್ಯವಾದಗಳು. (ಇವ ಕೆಲ ತಿಂಗಳ ಹಿಂದೆ ಬ್ಲೋಗಿಗೆ ಬೀಗ ಹಾಕಿದ ಮತಿನ್ಯರಿಗೆ ಸಹಾಯ ಮಾಡೋಕ್ ಹೋಗಿದ್ನೋ)ಇನ್ನೂ ಇವನ್ನ ಫ್ರೆಂಡ್ಸ್ ಅಂಡ್ ಫಾಲೊವರ್ಸ್ ಆದ 17 ಮಂದಿಗೂ ನನ್ನ ಧನ್ಯವಾದಗಳು.ಇನ್ನೂ ಇವನ್ನ ನೋಡೋಕ್ ನಮ್ಮ ಮನೆಗೆ (ಬ್ಲೋಗ್) ಬಂದೋರಿಗೂ ನನ್ನ ಧನ್ಯವಾದಗಳು

Tuesday, June 29, 2010

ಯಾರಿವಳು?

ಸನ್ನೆ ಮಾಡದೆ ನನ್ನ ಕರೆವವಳು
ಸದ್ದೇ ಮಾಡದೆ ನನ್ನ ಚಿತ್ತ ಕದ್ದವಳು

ನೆನೆಯಲು ಕಾಲನೀಡದಂತೆ ನೆನಪಾಗುವವಳು
ಎಲ್ಲರಲ್ಲೂ ಅವಳನ್ನೇ ಹುಡುಕುವಂತೆ ಮಾಡಿದವಳು

ಪ್ರತಿ ತಿರಿವಿನಲ್ಲು ನನ್ನ ಕಣ್ಣು ಹುಡುಕುವವಳು
ಪ್ರತಿ ಹೆಜ್ಜೆಯಲ್ಲೂ ನನೊಂದಿಗೆ ನಡೆಯುವವಳು

ಪ್ರತಿ ರಾತ್ರಿ ಕನಸಿನಲ್ಲಿ ಸುಳಿದಾಡುವವಳು
ನನ್ನ ಹಗಲುಗನಸುಗಳ ಗುರಿ ಯಾಗುವವಳು

ಚೆಳಿಬಿಟ್ಟ ಹುಡುಗಿಯರ ನಡುವೆ ಮೈಮುಚ್ಚಿ ನನ್ನ ಸೆಳೆದವಳು
ಕತ್ತಲಲ್ಲೂ ಬೆತ್ತಲಾಗದೆ ನೆನಪಾಗುವವಳು

ಯಾರಿವಳು? ಗೆಳತಿಯೋ ನಲ್ಲೆಯೋ ಯಾರಿವಳು ?

Wednesday, January 20, 2010

Office ಒಂದು ಎರಡು...

ಎಂಟಾಯಿತು ಗಂಟೆ,
ಆಫೀಸ್ಗೆ ಹೊಂಟೆ.
ಈಗ ಗಂಟೆ ಒಂಭತ್ತು,
ಬ್ರೆಡ್ ಒಮ್ಲೆಟ್ ತಿಂದು ಮುಗಿದಿತ್ತು ... / Breakfast ಮಾಡಿಯಾಗಿತ್ತು.

ಗಂಟೆ ಹತ್ತೆಂದು ಗಡಿಯಾರ ತೋರಿತ್ತು,
ಬಂದ ಮೇಲ್-ಗಳನ್ನು ಓದಿ ಮುಗಿದಿತ್ತು.
ಈಗ ಗಂಟೆ ಹನ್ನೊಂದು,
ಕಾಫೀ ಬೇಕು ಈಗೊಂದು.

ಗಡಿಯಾರವೆಂತು ಸಮಯ ಹನ್ನೆರಡು,
ಚಾಟಲ್ಲಿ ಆಡಿಯಾಗಿತ್ತು ಮಾತೊಂದೆರಡು.
ಹಾಗೆಹೋಯ್ತು ಮಧ್ಯಾನ್ಹ ಒಂದು,
ಊಟದ ಸಾಲಲ್ಲಿ ನಾನೆಂದೂ ಮುಂದು.

ನಾನೆಂದೆ ಅಯ್ಯೋ ಆಗಲೇ ಎರಡು,
ಗೆಳೆಯನೆಂದ ಕೊನೆಯ ಒಂದಾಟ ಆಡಿಕೊಂಡು ಹೊರಡು.
ಕುರ್ಚಿಯಲ್ಲಿ ಕುಳಿತಾಗ ಸಮಯ ಮೂರು,
ಮಾಡೋಣ ವೆನಿಸಿತು ಕೆಲಸ ಒಂದುಚೂರು.

ಗೆಳೆಯನೆಂದ ಈಗ ಸಮಯ ನಾಲ್ಕು,
ಇದು ಟೈಮ್ ಫಾರ್ ಎ ಟಿ ಬ್ರೇಕು.
ಸಮಯ ಹಾಗೇ ಹೋಯ್ತು ನಾಲ್ಕೂವರೆ,
ಕೆಲಸ ಶುರುಮಾಡಿಲ್ಲ ಅರೆರೇ.

ನೋಡನೋಡುತ ಗಂಟೆ ಆಯ್ತು ಐದು,
Status ನಾತುಂಬ busy ಇಂದು.
ಆಯಿತೆಂದರೆ ಸಂಜೆ ಆರು,
ಮೈಲ್ ಕಳಿಸಿ ಬಸ್ ಏರು.

Tuesday, January 19, 2010

ನಲ್ಲೇ....

ಜಗತ್ತಿನಲ್ಲಿ ಏಳುಜನಾ ಒಂದೇತರ ಇರುತ್ತಾರೆಂದವನು ಅರೆಪ್ರೆಮಿಯಿರಬೇಕು
Because ನನಗೆ ಯಲ್ಲರೂ ನೀನಂತೆಯೇ ಕಾಣುತಾರೆ.

ನಿನ್ನ ಕನಸೆಂಬ ಎಣ್ಣೆ ಕಲಿಯಾದಾಗ ನನ್ನ ಜೀವನ ಬರೀ ಕತಲೆ.

ಮಳೆ ಬಾರದಿದ್ದರೆ ಜಗದಲ್ಲಿ ಲೋಡ್ ಷೆಡಿಂಗ್,
ನೀ ಬರದೇಹೋದರೆ ಜಾಗದಿಂದ ನನ್ನ ಲೋಡ್ ಷೆಡಿಂಗ್.

ಕಣ್ಣ ಮುಚಿದಾಗಲೆಲ್ಲ ಕಾಣುವ ನೀನು,
ನನ್ನ ಕಣ್ಣ ರೆಪ್ಪೆಯಿಂದಿರುವೆಯೇನು?

ನಲ್ಲೇ ನೀನೆಷ್ಟು ಸುಂದರಿ

ನಲ್ಲೇ ನೀನೆಷ್ಟು ಸುಂದರಿ,
ನೀನೇನು ನನಗಾಗಿ ಧರೆಗಿಳಿದ ಕಿನ್ನರಿ?
ನಿನ್ನ ನೋಡಿದಾಗ ಎದೆಯಲ್ಲಿ ಭಾರಿಸಿತ್ತು ಕಿಂದರಿ.
ಅನ್ನಿಸಿದು ಮಾಡಿಕೊಂಡು ನೋಡಿದಾಗ ಕಣ್ಸರೀ ,

ಕೋಣನ ಮುಂದೆನ್ನ ಹೃದಯ ಭಾರಿಸಿತ್ತು ಕಿಂದರಿ !!!

Wednesday, January 13, 2010

ಮಂಗನ ಕೈಗೆ ಮಾಣಿಕ್ಯ ..

ಮಂಗನ ಕೈಗೆ ಮಾಣಿಕ್ಯ ಸಿಕಿದಂತೆ ಉತ್ತಮ ಉದಾಹರಣೆ

ನನ್ನ ಗೆಳೆಯನಿಗೆ ಅವನ ಹೆಂಡತಿ ಸಿಕ್ಕಿದ್ದು,
ಆ ಹೆಂಡತಿಯ ಗೆಳತಿಗೆ ನಾ ಸಿಕ್ಕಿದ್ದು .

ಕನಸು ಮತ್ತು ನಲ್ಲೆ

ಕನಸಿನಲ್ಲೂ ಕೈ ಕೊಡಬೇಡ ಗೆಳತಿ ಆ ನೋವ ಕನಸಿನಾಚೆಗೂ ನ ಸಹಿಸಲಾರೆ
ಯೇಕೆ೦ದರೆ ಕನಸಿನಲ್ಲಿ ನಾ ಕುಡಿವ ವಿಷದಿಂದ ನಾ ಸಾಯಲಾರೆ.

ಕನಸಿನ ತಿಂಗಳ ಪಾಸ್ ಉಂಟೆ??
ಯೇಕೆ೦ದರೆ ದಿನವೂ ಅವಳು ನನ್ನ ಕನಸಿನಲ್ಲಿ ವಿಹರಿಸುತಾಳೆ.

ಕೈ ಹಿಡಿದು ಚಂದಿರನ ವರೆಗೂ ಜೊತೆಬರುವ ನೀನು.
ಕನಸಿನ್ನಲ್ಲೂ ನಿಮ್ಮ ಮನೆಯ ತಿರುವಿನಲ್ಲಿ ಕೈಬಿಡು ಯೆನ್ನುವೆಯಲ್ಲ ನೀನು.

ನಲ್ಲೇ ಕನಸಿನಲ್ಲಿ ಮಾಡಿದ ತಪ್ಪಿಗೆ
ಕನಸಿನಾಚೆ ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ ತಾನೇ ?
ಅಬ್ಬಾ ಬದುಕಿದೆ


ಮೊನ್ನೆ ನಿನ್ನ ಅಪ್ಪನ ಗಾಡಿಯ ಹವಾ ತೆಗೆದಿದ್ದೆ ಕನಸಿನಲ್ಲಿ.

ಜನ್ಮ ದಿನದ ಶುಭಾಶಯಗಳು ಅಂಡ್ ಅಂಡ್ ....!


ಅವಳ ಹೆಸರ ತಿಳಿಯುವ ಮೊದಲೇ ಅವಳಮೇಲೆ ಪ್ರೀತಿ ಮೂಡಿತ್ತು.
ಅವಳ ಬಿಟ್ಟು ಜಗದಲ್ಲಿ ಮತ್ಯಾರೂ ಬೇಡ ವೆನಿಸಿತ್ತು.
ಅವಳು ಜೊತೆಯಿರಲು ಜಗವೇ ನನ್ನದೆನಿಸಿತ್ತು.
ಅವಳು ಕಾಣದೆ ಹೋದರೆ ಕಣ್ಣಿ೦ದ ಕಂಬನಿಯು ಮೂಡಿತ್ತು.

ಅವಳು ಕೇಳಿದರೆ ತಾರೆ ಚಂದಿರನನ್ನೇ ತಂದು ಕೊಡುವಷ್ಟು ಪ್ರೀತೀಯೆದೆ ,
ಆದರವಳ ಪ್ರೀತಿ ಇದಾವುದನ್ನು ಅಪೇಕ್ಷಿಸದಂತದಾಗಿದೆ.
ಎಷ್ಟೋ ಬಾರಿ ಕೂಗಿ ಜಗೆಕೆ ಹೇಳಬೇಕಿನಿಸಿದೆ ,
ಅವಳಮೆಲೆ ನನಗೆ0ತಹ ಅಪಾರ ಪ್ರೀತೀಯೆದೆ .

ಎಷ್ಟೋ ಬಾರಿ ಪ್ರಯತ್ನಿಸಿದರೂ ಗಂಟಲು ಕಟ್ಟುತಿತ್ತು.
ಆದರಿಂದು ಅದಕೆ ಕಾಲ ಕೂಡಿ ಬಂದಿತ್ತು.
ಅವಳ ತಬ್ಭಿ ಹಿಡಿದು ಹೇಳಿದೆ
ಜನ್ಮ ದಿನದ ಶುಭಾಶಯಗಳು

ಅಂಡ್

ಅಂಡ್

ಅಂಡ್

ಐ ಲವ್ ಯೂ ಅಮ್ಮ.

ಕವನ ಮುಗಿಯುವ ಮುನ್ನ ಕಾಲವಾದೆಯಾ ?????


ಬಯಕೆಯ ಬೇಗೆಯಲ್ಲಿ ಬೇಯುವಮೊದಲೇ ಬೆಂಕಿಯಲ್ಲಿ ಬೆರೆತೆಯಾ?
ಮನಕೆ ಸೇರುವಮೊದಲೇ ಮಣ್ಣಲ್ಲಿ ಮಲಗಿದೆಯಾ ?
ಉಸಿರು ಉಸಿರಲಿ ನೆಲಸುವಮೊದಲೇ ಗಾಳಿಯಲ್ಲಿ ಕಲೆತೆಯಾ ?
ಬದುಕಿ ಬಾಳುವಮೊದಲೇ ಬಾನಲ್ಲಿ ಚುಕ್ಕೀಯಾದೆಯಾ ?
ಜನುಮ ಜನುಮದಾ ಕನಸ ಕಾಣುವಮೊದಲೇ ಜಲದಲ್ಲಿ . . . .

ಕವನ ಮುಗಿಯುವ ಮೊದಲೇ ಕಾಲವಾದೆಯಾ ?????.