ಎಂಟಾಯಿತು ಗಂಟೆ,
ಆಫೀಸ್ಗೆ ಹೊಂಟೆ.
ಈಗ ಗಂಟೆ ಒಂಭತ್ತು,
ಬ್ರೆಡ್ ಒಮ್ಲೆಟ್ ತಿಂದು ಮುಗಿದಿತ್ತು ... / Breakfast ಮಾಡಿಯಾಗಿತ್ತು.
ಗಂಟೆ ಹತ್ತೆಂದು ಗಡಿಯಾರ ತೋರಿತ್ತು,
ಬಂದ ಮೇಲ್-ಗಳನ್ನು ಓದಿ ಮುಗಿದಿತ್ತು.
ಈಗ ಗಂಟೆ ಹನ್ನೊಂದು,
ಕಾಫೀ ಬೇಕು ಈಗೊಂದು.
ಗಡಿಯಾರವೆಂತು ಸಮಯ ಹನ್ನೆರಡು,
ಚಾಟಲ್ಲಿ ಆಡಿಯಾಗಿತ್ತು ಮಾತೊಂದೆರಡು.
ಹಾಗೆಹೋಯ್ತು ಮಧ್ಯಾನ್ಹ ಒಂದು,
ಊಟದ ಸಾಲಲ್ಲಿ ನಾನೆಂದೂ ಮುಂದು.
ನಾನೆಂದೆ ಅಯ್ಯೋ ಆಗಲೇ ಎರಡು,
ಗೆಳೆಯನೆಂದ ಕೊನೆಯ ಒಂದಾಟ ಆಡಿಕೊಂಡು ಹೊರಡು.
ಕುರ್ಚಿಯಲ್ಲಿ ಕುಳಿತಾಗ ಸಮಯ ಮೂರು,
ಮಾಡೋಣ ವೆನಿಸಿತು ಕೆಲಸ ಒಂದುಚೂರು.
ಗೆಳೆಯನೆಂದ ಈಗ ಸಮಯ ನಾಲ್ಕು,
ಇದು ಟೈಮ್ ಫಾರ್ ಎ ಟಿ ಬ್ರೇಕು.
ಸಮಯ ಹಾಗೇ ಹೋಯ್ತು ನಾಲ್ಕೂವರೆ,
ಕೆಲಸ ಶುರುಮಾಡಿಲ್ಲ ಅರೆರೇ.
ನೋಡನೋಡುತ ಗಂಟೆ ಆಯ್ತು ಐದು,
Status ನಾತುಂಬ busy ಇಂದು.
ಆಯಿತೆಂದರೆ ಸಂಜೆ ಆರು,
ಮೈಲ್ ಕಳಿಸಿ ಬಸ್ ಏರು.
ಸಂಬಳ ಬರುತ್ತೆ ತಾನೆ...?
ReplyDeleteಸಾಕು....
ಚೆನ್ನಾಗಿ ಬರೆದಿದ್ದೀರ...
:-) Chennagide. Ee blog hesarige takka kavana.
ReplyDeleteಚೆನ್ನಾಗಿದೆ. ಆಫೀಸಿನಲ್ಲಿ ಇಷ್ಟೇನಾ ಕೆಲಸ ನಿಮಗೆ!!! ಹ್ಹ ಹ್ಹ ಹ್ಹ
ReplyDeleteಇಷ್ಟೊಂದು ಕೆಲಸ ಹೇಗೆ manage ಮಾಡ್ತೀರೋ....ಹ ಹ ಹ...ತುಂಬಾ ಚೆನ್ನಾಗಿದೆ. ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು.
ReplyDeleteನಿಮ್ಮಾಪ್ಹೀಸಿನಲ್ಲಿ ನಮಗೊಂದು ಕೆಲಸ ನೋಡ್ರಿ ಮಾರಾಯ್ರೇ :) ಅನುಭವ ಕವನ ಚೆನ್ನಾಗಿದೆ
ReplyDelete--
ಅರವಿಂದ್
ಇದ್ಯಾಕೋ ....ಸೋಮಾರಿ ಸಿದ್ದುಗಳು...ಅಧಿಕಾರಿಗೆ ಗುದ್ದು ಅನ್ನೋ ತರಹ ಮಾಡ್ತಿರೋಹಾಗೆ ಕಾಣುತ್ತೆ...ಹಹಹ ಒಟ್ನಲ್ಲಿ ಏನೂ ಮಾಡ್ದೇನೇ..ದಿನ ಕಳೀತು...
ReplyDeleteಗ್ಯಾರಂಟೀ ಸಾರಕಾರೀ ಕೆಲ್ಸಾನೇ?
ReplyDeleteನಮಸ್ಕಾರ
ನಾನು ಗೊಪೀನಾಥ
ಚೆನ್ನಾಗಿದೆ ನಿಮ್ಮ ಕವಿತೆ
sakkath aagide... aadre ee office janjaata dalli hudugi angle kottidre inna ruchikara vaagi irodu.. nevertheless awsome work!!!
ReplyDeleteಚೆನ್ನಾಗಿದೇ ರಿ ಕವನ. ಆಫೀಸಿನಲ್ಲಿ ಸ್ವಲ್ಪ ಹೊತ್ತು ಬೋರು ಕಳೆಯಿತು. ಥ್ಯಾಂಕ್ಸ್ ಸೋಮಾರೀ:-)
ReplyDelete