Wednesday, June 30, 2010

ಎನ್ ಹೇಳ್ಲಿ ಇವನ ಕತೆನಾ...

ಎನ್ ಹೇಳ್ಲಿ ಇವನ ಕತೆನಾ...
ಇವನಂತೊನ ನಾನು ಯೆಲೆಲ್ಲು ನೋಡಿರಲಿಲ್ಲ. ಇವನು ಹುಟ್ಟಿದು ಒಂದು ದೊಡ್ಡ ಕತೆ ಅಂತೀರೋ ಮಿಸ್ಟ್ರಿ ಅಂತೀರೋ ನಾಕಾಣೆ. ಒಂದು ದಿನ ನಾಡು ರಾತ್ರಿ ಇವನು ಹುಟ್ಟಿದು. ಇದೇನು ದೊಡ್ಡ ವಿಷಯ ಅಂತೀರಾ ಇವನು ಹುಟ್ಟಿದು ಕೆಲದಿನಗಳ ಹಿಂದೆ ಗೆಳೆಯನಾದ ಪಕ್ಕದಮನೆ ಶಿವನ ದಯೆಯಿಂದ ಅನ್ನೋದು ದೊಡ್ಡ ವಿಷಯ.

ಇವನ ಅಪ್ಪನಿಗೂ ಬಹಳ ದಿನದಿಂದ ಈ ಆಸೆ ಇತ್ತು ಆದ್ರೂ ಬಹಳ ಸೋಮಾರಿ ಸೋ ಶಿವನ ದಯೆ ಇಂದ ನಾಡು ರಾತ್ರಿ ಸದ್ದು ಗದ್ದಲ ವಿಲ್ಲದೇ ಹುಟಿದ.

ಅದ್ ಯಾವ ಗಳಿಗೆಲ್ ಹುಟಿದ್‍ನೋ ಏನೋ ನೋಡಿ ಹುಟ್ಟಿದವನೆ ನೆಡೆಯಲು ಶುರು ಮಾಡಿದ. ಇದಕ್ಕೆ ಆ ಪಕ್ಕದಾಮನೆಯವನ ಸಹಾಯವೂ ಇತ್ತು ಅನ್ನಿ. ಎನ್ ಹೇಳ್ತೀರಿ ಅವ್ನ್ ಆಟಾನ ದಿನ ರಾತ್ರಿ ಆಯ್ತು ಅಂದ್ರೆ ಹಾಡನು ಕಿರ್ಚೊನು ಅಪ್ಪಾ ಸಾಕ್ ಸಾಕ್ ಹಾಗಿ ಹೋಗ್ತಿತ್ತು. ಇವನಿಂದ ದಿನ ರಾತ್ರಿ ನಿದ್ದೇನೆ ಇಲ್ಲ.

ಕೆಲ ದಿನಗಳ ನಂತರ ಈ ಪಕ್ಕದಮನೆಯವನು ಮನೆಗೆ ಬೀಗ ಹಾಕಿ ಯಾಕೋ ಅಜ್ಞಾತ ವಾಸಕ್ಕೆ ಹೋದ. ಅವನು ಅತ್ಲಾಗ್ ಹೋಗಿದ್ದೇ ಇವನಿಗೆ ಅವ್ರಪ್ಪನ ಗಾಳಿ ಸೋಕಿತು ನೋಡಿ ಇವನು ಸೋಮಾರಿ ಆಗೋಕ್ ಶುರು ಮಾಡಿದ. ಹಾಡೋಕೂ ಕಿರ್ಚೊಕು ಸೋಮಾರಿತನ ಈ ಬಡ್ಡಿ ಮಗನಿಗೆ ಎನ್ ಮಾಡೋದು.

ಆದ್ರೂ ಇವನೇನು ಸಾಮಾನ್ಯದವನ ಇವನು ಹಾಡೋದು ಕೇಳಿ ಇವನಿಗೆ ಆಲ್‌ರೆಡೀ ಫಾನ್ಸು ಫಾಲ್ಲೋವೆರ್ಸು . ಪಕ್ಕದ ಬೀದಿಯ ಒಂದು 17 ಮಂದಿ ಫ್ರೆಂಡ್‌ಸ. ಅದರಲ್ಲಿ ಗರ್ಲ್ ಫ್ರೆಂಡ್ಸ್ ಬೇರೆ. ಅದೆಲಾದ್ರೂ ಹೋಗ್ಲಿ ಅಂದ್ರೆ ಇವನ್ನ ದಿನ ನೋಡೋಕೆ ಇವನ ಜೊತೆ ಆಡೋಕೆ ಮನೆಗೆ ದಿನ ಜನನು ಬರ್ತಿದ್ರು ಯಿಸ್ಟಾ ಆದೋರು ಫ್ರೆಂಡ್ಸ್ ಆದ್ರೂ ಇವನ ಹಾಡೊದಕ್ಕೆ ಷಹಬಾಸ್‌ಗಿರಿ ಕೊಟ್ರೂ. ಇನ್ನೂ ಕೆಲವರು ಇವ್ನಜ್ಜಿ ಯೆನ್ ಹಡ್ತಾನೋ ಕಿರುಚ್ತಾನೋ ಒಂದು ಅರ್ತ ಆಗೋಲ್ಲ ಅಂತ ಬೈಕೊಂಡು ಹೊರಟೆ ಹೋದ್ರೂ.

ಈಸ್ಟೆಲ್ಲಾ ಇವನ ಬಗ್ಗೆ ಇವಾಗ್ ಯಾಕಪ್ಪಾ ಹೇಳ್ತಿದೀನಿ ಅಂದ್ರೆ ಇವನಿಗೆ ಒಂದು ವರ್ಷ ತುಂಬಿದೆ ಅದಕ್ಕೆ.

ಹೊ ಯಾರು ಅಂದ್ರ ಇವನು ಇನ್ಯಾರು ಅಲ್ಲಾರಿ ಇವನೇ ಸೋಮಾರಿಪ್ರಶಾಂತ ಬ್ಲೋಗೂ ಹಹಹ....

ಇವನು ವರುಷದ ಕೆಳಗೆ ಹುಟ್ಟಲಿಕ್ಕೆ ಮತ್ತು ಇವನನ್ನು ಬೆಳೆಸಲಿಕ್ಕೆ ಸಹಾಯ ಮಾಡಿದ ಪ್ರಿಯ ಗೆಳೆಯ ಶಿವು (ಯಳವತ್ತಿ ಬ್ಲಾಗ್) ಗೆ ನನ್ನ ಧನ್ಯವಾದಗಳು. (ಇವ ಕೆಲ ತಿಂಗಳ ಹಿಂದೆ ಬ್ಲೋಗಿಗೆ ಬೀಗ ಹಾಕಿದ ಮತಿನ್ಯರಿಗೆ ಸಹಾಯ ಮಾಡೋಕ್ ಹೋಗಿದ್ನೋ)ಇನ್ನೂ ಇವನ್ನ ಫ್ರೆಂಡ್ಸ್ ಅಂಡ್ ಫಾಲೊವರ್ಸ್ ಆದ 17 ಮಂದಿಗೂ ನನ್ನ ಧನ್ಯವಾದಗಳು.ಇನ್ನೂ ಇವನ್ನ ನೋಡೋಕ್ ನಮ್ಮ ಮನೆಗೆ (ಬ್ಲೋಗ್) ಬಂದೋರಿಗೂ ನನ್ನ ಧನ್ಯವಾದಗಳು

4 comments:

  1. Many Many Happy returns of the Day

    ReplyDelete
  2. naguta naguta baalu hege nooru varusha.....
    endu hege erali erali harusha harusha.......
    ullasada ee shubha dinake santhoshave udugoreyu...
    naguta naguta baalu hege nooru varusha.....

    ReplyDelete
  3. Hey Prashant.. tumba congrats sir..

    ReplyDelete