Wednesday, January 8, 2020

ನಾನು ಯಾರು....?



ಭೂಮಿಗೆ ಬರುವ ಮೊದಲೇ,  
ಭಾಷೆ ಕಲಿತು ಬಂದ ಅಭಿಮನ್ಯು ನಾನು
ಮಾತೃಭಾಷೆಯ ಚಕ್ರವ್ಯೂಹದಲ್ಲೇ
ಸಿಲುಕ ಭಯಸುವ ಕರ್ನಾಟ ಕುವರ ನಾನು

ಪಾಟಿ ಪೆಣಿ, ಗೋಲಿ ಗಜ್ಜುಗಗಳ  
ನಡುವೆ, ಹೊದಿದವನು ನಾನು
ಟಿಪ್ಪುವಿನ ಶೌರ್ಯ, ರಾಯಣ್ಣನ ಧೈರ್ಯ
ಓಬವ್ವರ ಕಥೆಕೇಳಿ ಬೆಳೆದವನು ನಾನು 

ತೇಜಸ್ವಿಯೊಡನೆ ಬೇಟೆಯಾಡಿ, ಕುವೆಂಪು ಜೊತೆ ಮಲೆಗಳಲ್ಲಿ ಸುತ್ತಾಡಿ
ರಾ ಸು ಜೊತೆ ಹೊಸ ಹಗಲು ಕಂಡವನು ನಾನು
ಬೀಚಿ ಮಾತಿಗೆ ನಕ್ಕು, ಕಾರ್ನಾಡರ ತುಗಲಕ್ ನೋಡಿ
ಕಾರಂತರೊಡನೆ ಯಕ್ಷಗಾನಕ್ಕೆ ಹೆಜ್ಜೆ ಆಕಿದವನು ನಾನು

ಖಾನ್ ಸಾಹೇಬರ ಶಹನಾಯಿ ಕೇಳಿ, ಹಾನ್ಗಲ್ಲರ ಹಾಡಿಗೆ ತಾಳ ಹಾಕಿ
ನಾಯ್ದೂರ ಹರಿಕಥೆ ಕೇಳಿ ನಕ್ಕವನು ನಾನು
ಸುಬ್ಬಣ್ಣರ ಕಾಡ ಕುದುರೆಯೇರಿ, ಅನಂತರ ಜೊತೆ ಮೈಸೂರು ಸುತ್ತಿ
ಏರುದನಿಯಲಿ ಅಶ್ವತ್ಥರ ಜೊತೆ ಹಾಡಿದವನು ನಾನು

ನಾನು ಪಭಾಕರ್ ಎಂದು ತೊದಲುತ್ತಾ 
ಕಣ್ಣರಳಿಸಿ, ಪರಧೆಯಮುಂದೆ ಕೂತ, ಚಿತ್ರರಸಿಕ ನಾನು
ರಾಜಕುಮಾರನ ಜೊತೆ, ಜೇಡರ ಭಲೆ ಭೇದಿಸಿ
ಅಣ್ಣಾವ್ರ ಮಕ್ಕಳೊಂದಿಗೆ ಅಣ್ಣಾ ಬಾಂಡ್ ಆದವನು ನಾನು

ಅಮ್ಮ ಜೊತೆಗೆ, A for Amma,  
ಎಂದು ಹೇಳಿಕೊಡುವ ಬೆಪ್ಪ ಅಪ್ಪ ನಾನು 
ಭಂಗಾರಾಧಾಂತಹ ಭಾಷೆಯನ್ನೇ
ಬಳುವಳಿಯಾಗಿ ಕೊಡ ಬಯಸುವವನು ನಾನು

ಕಾಸರಗೂಡೆ ಆಗಲಿ, King Crossಅಲ್ಲೇ ಇರಲಿ
ಕನ್ನಡಿಗ, ಹೆಮ್ಮೆಯ ಕನ್ನಡಿಗ ನಾನು







No comments:

Post a Comment