Showing posts with label ಸಣ್ಣ ಕವನಗಳು. Show all posts
Showing posts with label ಸಣ್ಣ ಕವನಗಳು. Show all posts

Monday, July 4, 2011

ನೀ ನಡುವೆ ಬಂದಾಗ

ಗೆಳತಿ ನಾ ಇನೆಷ್ಟು ಹೇಳಲಿ ಈ ನನ್ನ ತುಟಿಗಳಿಗೆ
ನಿಮಿಷಕೊಮ್ಮೆ ಮಾತುಗಳನಡುವೆ ನಿನ್ನ ಹೆಸರು ತಂದು ತೊದಲುತ್ತಿದೆ.
ನಾ ಯೇನಮಾಡಲಿ ಈ ನನ್ನ ಮನಸಿಗೆ
ಪ್ರತಿ ರಾತ್ರಿ ಕನಸುಗಳ ನಡುವೆ ನೀನು ಸಿಕ್ಕಿ ಎಡವುತ್ತಿದೆ

Friday, June 10, 2011

ಅಣ್ಣಾ ಗೆ ಜೈ

ದೇಶ ತಿನ್ನುತ್ತಿರುವ ಶಿಶು-ಪಾಲ ರಿಗೆಲ್ಲ,
ಅಣ್ಣ ಬರೆಯುತಿಧಾನೆ ಲೋಕ-ಪಾಲ್ ಬಿಲ್ಲು.

ಹೊರ ದೇಶಧಲ್ಲಿ ಬಚ್ಚಿಟ್ಟ ಕರಿ ಲಕ್ಷ್ಮಿಯನ್ನು,
ಮನೆಗೆ ಕರೆತನ್ನಿರೆಂದು ಹೋರಾಟ ಮಾಡುತಿದ್ದಾನೆ ಬಾಬಾ ಎಲ್ಲೆಲ್ಲು.

ಇದನೆಲ್ಲಾ ನೋಡುತಿದ್ದರೆ ಅನಿಸುತ್ತಿದೆ,
ಕಟ್ಟಬೇಕಾಗಬಹುದು ಬೇಗನೆ ಮತ್ತೊಂದು ಅಂಡಮಾನ್ ಜೈಲು.

Tuesday, January 4, 2011

ಪ್ರೇಮ ಕಾಮ

ನಲ್ಲೆ
ಪ್ರೇಮ ಕಾಮಗಳೆರಡು
ಒಂದೇ ನಾಣ್ಯದ ಎರಡು ಮುಖಗಳಂತೆ.
ಒಂದನ್ನು ಬಿಟ್ಟು ಒಂದು
ಇದ್ದರೆ ಅದಕೆ ಭೆಲೆಯಿಲ್ಲವಂತೆ.

Monday, January 3, 2011

ಪ್ರೀತಿ ಪ್ರೇಮ

ನಲ್ಲೆ
ಒಮ್ಮೆ ಪ್ರೀತಿ ಪ್ರೇಮ ಜಗಳವಾಡಿದರಂತೆ
ಆದರೆ ಗೆಧಿದು ಮಾತ್ರ ವಿರಸವಂತೆ.

ಮತ್ತೆ
ಪ್ರೀತಿ ಪ್ರೇಮ ಒಂದುಗೂಡಿದರಂತೆ
ಆಗ ಹುಟ್ಟಿದೆ ಸರಸವಂತೆ.

Thursday, December 30, 2010

ಚೆನ್ನಾಗಿ ತಿನ್ನಿ ಇಲ್ಲ ತೆಳ್ಳಗಾಗೋಕೆ ಮುಂಜಾನೆ ಓಡಿ

ಕುಡಿರಿ ಇಲ್ಲ ಇನ್ಮೇಲ್ ಕುಡಿಯೋಲ್ಲ ಅಂತ ಸಂಕಲ್ಪಮಾಡಿ

ಏನೆ ಬಿಡಿ ಏನೆ ಮಾಡಿ

ಆದ್ರೆ ವರ್ಷ ಪೂರ್ತಿ,

ನನ್ನ ಮರೀಬೇಡಿ, ಪ್ರೀತಿಮಾಡಿ

ಹೊಸ ವರ್ಷದ ಶುಭಾಶಯಗಳು

ನನ್ನ ಸಂಕಲ್ಪ ಸೋಮಾರಿತನ ಬಿಡಬೇಕು ಅನ್ನೋದು ನಿಮ್ಮ ಸಂಕಲ್ಪ ತಿಳಿಸಿ

Tuesday, January 19, 2010

ನಲ್ಲೇ ನೀನೆಷ್ಟು ಸುಂದರಿ

ನಲ್ಲೇ ನೀನೆಷ್ಟು ಸುಂದರಿ,
ನೀನೇನು ನನಗಾಗಿ ಧರೆಗಿಳಿದ ಕಿನ್ನರಿ?
ನಿನ್ನ ನೋಡಿದಾಗ ಎದೆಯಲ್ಲಿ ಭಾರಿಸಿತ್ತು ಕಿಂದರಿ.
ಅನ್ನಿಸಿದು ಮಾಡಿಕೊಂಡು ನೋಡಿದಾಗ ಕಣ್ಸರೀ ,

ಕೋಣನ ಮುಂದೆನ್ನ ಹೃದಯ ಭಾರಿಸಿತ್ತು ಕಿಂದರಿ !!!

Wednesday, January 13, 2010

ಕವನ ಮುಗಿಯುವ ಮುನ್ನ ಕಾಲವಾದೆಯಾ ?????


ಬಯಕೆಯ ಬೇಗೆಯಲ್ಲಿ ಬೇಯುವಮೊದಲೇ ಬೆಂಕಿಯಲ್ಲಿ ಬೆರೆತೆಯಾ?
ಮನಕೆ ಸೇರುವಮೊದಲೇ ಮಣ್ಣಲ್ಲಿ ಮಲಗಿದೆಯಾ ?
ಉಸಿರು ಉಸಿರಲಿ ನೆಲಸುವಮೊದಲೇ ಗಾಳಿಯಲ್ಲಿ ಕಲೆತೆಯಾ ?
ಬದುಕಿ ಬಾಳುವಮೊದಲೇ ಬಾನಲ್ಲಿ ಚುಕ್ಕೀಯಾದೆಯಾ ?
ಜನುಮ ಜನುಮದಾ ಕನಸ ಕಾಣುವಮೊದಲೇ ಜಲದಲ್ಲಿ . . . .

ಕವನ ಮುಗಿಯುವ ಮೊದಲೇ ಕಾಲವಾದೆಯಾ ?????.

Monday, June 29, 2009

ನನ್ನ ಹೃದಯ ಕಾದಿದೆ

ಬಾನ೦ಗಳದಿ ಸೂರ್ಯ ನುದಯಿಸಿದ0ತೆ, ನೀ ಯೆನ್ನ ಹೃದಯದಲ್ಲಿ ಮೂಡಿದೆ.
ಬಿಸಿಲಿಗೆ ಕರಗುವ ಹಿಬನಿಯಂತೆ, ನಿನ್ನ ನೋಟಕೆ ನಾ ಕರಗಿದೆ.
ಸೂರ್ಯನನ್ನೇ ಹಿಂಬಾಲಿಸುವ ತಾವರೆಯಂತೆ, ನಿನ್ನ ಮನೆಯ ದಾರಿಯ ಸವೆಸಿದೆ.
ಬಿಸಿಲ ಬೇಗೆಗೆ ಬಾಡುವ ಪುಷ್ಪದಂತೆ, ನಿನ್ನ ವಿರಹಕೆ ನಾ ಸೊರಗಿದೆ.
ನೀಲಾಕಾಶಕೆ ಸೂರ್ಯ ಮುಸಂಜೆ ಬಣ್ಣ ಚೆಲ್ಲುವಂತೆ, ಎನ್ನ ಇರುಳಿಗೆ ನೀ ಕನಸ ತುಂಬಿದೆ.
ಇರುಳು ಎಂದು ಕಳೆಯುವುದೆಂದು ನನ್ನ ಹೃದಯ ಕಾದಿದೆ.

ಯಲ್ಲ ಕವನಗಳಲ್ಲೂ ಹುಡುಗಿಯನ್ನು ಹೂವು, ಭೂಮಿ, ಹಿಭನಿಗೆ ಹೋಲಿಸಿ ಹುಡುಗನನ್ನು ಸೂರ್ಯನಿಗೆ ಹೋಲಿಸುತ್ತಾರೆ.
ನಾನು ವಿರುಧವಾಗಿ ಪ್ರಯತ್ನಿಸಿದ್ದೇನೆ ಹೇಗಿದೆ ದಯವಿಟ್ಟು ತಿಳಿಸಿ.

Saturday, June 27, 2009

Modala kavana nanna hosa dove hesarali

ಬೀಳೋ ಹನಿಗಳೆಲ್ಲ ಮುತ್ತಾಗುವುದಿಲ್ಲ...
ಹಾಗೆ ಸಿಕ್ಕ ಹುಡುಗಿಯರೆಲ್ಲ ಗೆಳತಿಯರಾಗುವುದಿಲ್ಲ... ,
ಕಟ್ಟಿದ ಗೊರಿಗಳೆಲ್ಲಾ ತಾಜ್ ಮಹಲ್ ಆಗುವುದಿಲ್ಲವೋ
ಹಾಗೆ, ಸಿಕ್ಕಿ ಆದ ಗೆಳತಿಯರೆಲ್ಲಾ ಪ್ರೆಯಸಿಯರಗಲಿಲ್ಲ...
ಪ್ರಿಯ ನಿನ್ನ ಹೃದಯವೆಂಬ ತಾಜ್ ಮಹಲ್ ನಲ್ಲಿ ನಾನು ಮುತ್ತಾದರೆ, ನನ್ನ ಜನ್ಮ ದನ್ಯ...