Wednesday, January 8, 2020

ಪ್ರಾಯದ ಕಾವಲುದಾರಿಯಲ್ಲಿ
ವೈರಾಗ್ಯಾದತ್ತ ಮುಖಮಾಡಿ ನಿಂತವಗೆ
ದಾರಿತೊರಿದ ಹೆಣ್ಣೆ ನೀನೆಂತ ಜಾಣೆ

ಮುರಿದ ಗುಂಡಿಯ ಹಾಕುವ ನೆಪದಲ್ಲಿ
ತಳಹರಿದ ಕಿಸೆಗೆ
ಹೊಲಿಗೆಹಕುವ ಹೆಣ್ಣೆ ನೀನೆಂತ ಜಾಣೆ

ಇಂದಿಗೆ ಸೀಮಿತವಾಗಿದ ನನ್ನ ಕನಸಿಗೆ
ಕೈಗೊಂದು ಕಂದನ ಕೋಟು ನಾಳೆಯೆಂಬ
ಕನಸಕೊಟ ಹೆಣ್ಣೆ ನೀನೆಂತ ಜಾಣೆ

ಮಾತಿಗೆ ಮಾತು ಬೆಳೆದು
ಶಾಂತಿ ಕಾಣದಾದಾಗ್ ಮುತಲ್ಲೇ
ಪ್ರಶಾಂತ ಮಾಡುವ ಅಶ್ವಿನಿ ನೀನೆಂತ ಜಾಣೆ

ನಾನು ಯಾರು....?



ಭೂಮಿಗೆ ಬರುವ ಮೊದಲೇ,  
ಭಾಷೆ ಕಲಿತು ಬಂದ ಅಭಿಮನ್ಯು ನಾನು
ಮಾತೃಭಾಷೆಯ ಚಕ್ರವ್ಯೂಹದಲ್ಲೇ
ಸಿಲುಕ ಭಯಸುವ ಕರ್ನಾಟ ಕುವರ ನಾನು

ಪಾಟಿ ಪೆಣಿ, ಗೋಲಿ ಗಜ್ಜುಗಗಳ  
ನಡುವೆ, ಹೊದಿದವನು ನಾನು
ಟಿಪ್ಪುವಿನ ಶೌರ್ಯ, ರಾಯಣ್ಣನ ಧೈರ್ಯ
ಓಬವ್ವರ ಕಥೆಕೇಳಿ ಬೆಳೆದವನು ನಾನು 

ತೇಜಸ್ವಿಯೊಡನೆ ಬೇಟೆಯಾಡಿ, ಕುವೆಂಪು ಜೊತೆ ಮಲೆಗಳಲ್ಲಿ ಸುತ್ತಾಡಿ
ರಾ ಸು ಜೊತೆ ಹೊಸ ಹಗಲು ಕಂಡವನು ನಾನು
ಬೀಚಿ ಮಾತಿಗೆ ನಕ್ಕು, ಕಾರ್ನಾಡರ ತುಗಲಕ್ ನೋಡಿ
ಕಾರಂತರೊಡನೆ ಯಕ್ಷಗಾನಕ್ಕೆ ಹೆಜ್ಜೆ ಆಕಿದವನು ನಾನು

ಖಾನ್ ಸಾಹೇಬರ ಶಹನಾಯಿ ಕೇಳಿ, ಹಾನ್ಗಲ್ಲರ ಹಾಡಿಗೆ ತಾಳ ಹಾಕಿ
ನಾಯ್ದೂರ ಹರಿಕಥೆ ಕೇಳಿ ನಕ್ಕವನು ನಾನು
ಸುಬ್ಬಣ್ಣರ ಕಾಡ ಕುದುರೆಯೇರಿ, ಅನಂತರ ಜೊತೆ ಮೈಸೂರು ಸುತ್ತಿ
ಏರುದನಿಯಲಿ ಅಶ್ವತ್ಥರ ಜೊತೆ ಹಾಡಿದವನು ನಾನು

ನಾನು ಪಭಾಕರ್ ಎಂದು ತೊದಲುತ್ತಾ 
ಕಣ್ಣರಳಿಸಿ, ಪರಧೆಯಮುಂದೆ ಕೂತ, ಚಿತ್ರರಸಿಕ ನಾನು
ರಾಜಕುಮಾರನ ಜೊತೆ, ಜೇಡರ ಭಲೆ ಭೇದಿಸಿ
ಅಣ್ಣಾವ್ರ ಮಕ್ಕಳೊಂದಿಗೆ ಅಣ್ಣಾ ಬಾಂಡ್ ಆದವನು ನಾನು

ಅಮ್ಮ ಜೊತೆಗೆ, A for Amma,  
ಎಂದು ಹೇಳಿಕೊಡುವ ಬೆಪ್ಪ ಅಪ್ಪ ನಾನು 
ಭಂಗಾರಾಧಾಂತಹ ಭಾಷೆಯನ್ನೇ
ಬಳುವಳಿಯಾಗಿ ಕೊಡ ಬಯಸುವವನು ನಾನು

ಕಾಸರಗೂಡೆ ಆಗಲಿ, King Crossಅಲ್ಲೇ ಇರಲಿ
ಕನ್ನಡಿಗ, ಹೆಮ್ಮೆಯ ಕನ್ನಡಿಗ ನಾನು







Tuesday, September 11, 2012


ಕನಸಿನಾ ಕನ್ಯೆಯರಮೇಲೆ ಹತ್ತಾರು ಕವನಗಳ ಬರೆದೆನಲ್ಲ,
ಆದರೆ ಈ ಮನದನ್ನೆಯಮೇಲೆ ಎರಡು ಸಾಲೂ ಗೀಚಲು ಆಗುತಿಲ್ಲವಲ್ಲ?
ಇವಳನ್ನು ಬಣ್ಣಿಸಲು ಸರಿಸಮನಾದ ಪದಗಳೇ ಯಿದಂತಿಲ್ಲ..

Monday, July 4, 2011

ನೀ ನಡುವೆ ಬಂದಾಗ

ಗೆಳತಿ ನಾ ಇನೆಷ್ಟು ಹೇಳಲಿ ಈ ನನ್ನ ತುಟಿಗಳಿಗೆ
ನಿಮಿಷಕೊಮ್ಮೆ ಮಾತುಗಳನಡುವೆ ನಿನ್ನ ಹೆಸರು ತಂದು ತೊದಲುತ್ತಿದೆ.
ನಾ ಯೇನಮಾಡಲಿ ಈ ನನ್ನ ಮನಸಿಗೆ
ಪ್ರತಿ ರಾತ್ರಿ ಕನಸುಗಳ ನಡುವೆ ನೀನು ಸಿಕ್ಕಿ ಎಡವುತ್ತಿದೆ

Friday, June 10, 2011

ಅಣ್ಣಾ ಗೆ ಜೈ

ದೇಶ ತಿನ್ನುತ್ತಿರುವ ಶಿಶು-ಪಾಲ ರಿಗೆಲ್ಲ,
ಅಣ್ಣ ಬರೆಯುತಿಧಾನೆ ಲೋಕ-ಪಾಲ್ ಬಿಲ್ಲು.

ಹೊರ ದೇಶಧಲ್ಲಿ ಬಚ್ಚಿಟ್ಟ ಕರಿ ಲಕ್ಷ್ಮಿಯನ್ನು,
ಮನೆಗೆ ಕರೆತನ್ನಿರೆಂದು ಹೋರಾಟ ಮಾಡುತಿದ್ದಾನೆ ಬಾಬಾ ಎಲ್ಲೆಲ್ಲು.

ಇದನೆಲ್ಲಾ ನೋಡುತಿದ್ದರೆ ಅನಿಸುತ್ತಿದೆ,
ಕಟ್ಟಬೇಕಾಗಬಹುದು ಬೇಗನೆ ಮತ್ತೊಂದು ಅಂಡಮಾನ್ ಜೈಲು.

Monday, February 21, 2011

ಫೆಬ್ರವರಿ 14ಕರ effectu

ನಲ್ಲೆ
ನೀ ಯೆಸ್ಟೇಭಾರಿ ಕಡಲ ತೀರಧಂತೆ
ನನ್ನನ್ನು ಧೂರ ಧೂರ ಧೂಡಿದರು
ನಾ
ಹೊಸ ಹುಮಸ್ಸಿನಿಂದ ಹಲೆಯಂತೆ
ಮುತ್ತುಗಳ ಹೊತ್ತು ಮತ್ತೆ ಮತ್ತೆ ಬರುವೆ.

Tuesday, January 4, 2011

ಪ್ರೇಮ ಕಾಮ

ನಲ್ಲೆ
ಪ್ರೇಮ ಕಾಮಗಳೆರಡು
ಒಂದೇ ನಾಣ್ಯದ ಎರಡು ಮುಖಗಳಂತೆ.
ಒಂದನ್ನು ಬಿಟ್ಟು ಒಂದು
ಇದ್ದರೆ ಅದಕೆ ಭೆಲೆಯಿಲ್ಲವಂತೆ.